Posts

Showing posts from May, 2021

ಕಬ್ಬಿನ ಕಥೆ

*ಕಬ್ಬಿನ ಕಥೆ*  ನಾನಂದು ಕಬ್ಬಿನ ಮೊಗ್ಗಾಗಿದ್ದೆ  ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದೆ  ಯಾರೋ ಬಲೂ ಪ್ರೀತಿಯಿಂದ  ಕೈಗೆತ್ತಿಕೊಂಡು ......... ಎಷ್ಟು ಚೆನ್ನಾಗಿದೆ !!! ಎಷ್ಟು ಆರೋಗ್ಯವಂತವೂ ಆಗಿದೆ  ಎಂದು ಹೊಗಳಿ ಅಟ್ಟಕ್ಕೇರಿಸಿದರು  ನನ್ನ ಮನಸ್ಸು ಖುಷಿಯಿಂದ  ಕ್ಷೀರ ಸಾಗರದಲ್ಲಿ ತೇಲಿದಂತಾಗಿ  ಕಣ್ಮುಚ್ಚಿದೆ !!! ಕ್ಷಣ ಮಾತ್ರದಲ್ಲಿ ಕೈಗೆತ್ತಿಕೊಂಡವನು  ದೊಪ್ಪನೆ ಹದ ಮಾಡಿ ಸಿದ್ಧವಿಟ್ಟ  ಮಣ್ಣಿಗೆ ಒಗದೇ ಬಿಟ್ಟ  ಸಾಬೂನ ಹಚ್ಚಿ ತೊಳೆದು  ಮುಖಕ್ಕೆ ಪೌಡರ್ ಹಚ್ಚಿ  ಮುದ್ದಿಸಿ ಮುದ್ದಿಸಿ  ಮುಳ್ಳಿನ ಕಡ್ಡಿಯಿಂದ  ತುಸು ಗೀರಿದಂತೆ ಆಯಿತು  ನನ್ನ ಹಣೇ ಬರಹ ಎತ್ತಿ ಎಸೆದಾಗಲೇ ಅಂದುಕೊಂಡೆ  ಅವನೊಬ್ಬ ಕೂಲಿ ಎಂದು  ಸಾಕಷ್ಟು ಶಪಿಸಿದೆ  ನಾಶವಾಗಲೆಂದು  ಹರಸಿ ಮುಖ ಮುರಿದೆ  ಮಾಲಿಕನಿಗೆ ನಾನೆಂದರೆ  ಬಲೂ ಪ್ರೀತಿ .... ಮುದ್ದು ಮಕ್ಕಳಿಗೆ ಹಾಲುಣಿಸಿದಂತೆ  ನೀರು ಗೊಬ್ಬರ ಹಾಕುತ್ತಿದ್ದ  ಒಂದು ದಿನವೂ !! ನನ್ನ ನೋಡದೆ ಇರುತ್ತಿರಲಿಲ್ಲ ಅವನ ಪ್ರೀತಿ ಮಮತೆಗೆ  ಕೊಬ್ಬಿದ ಕುರಿಯಂತಾದೆ ... ಕೃಷ್ಣನ ತಲೆಯಲ್ಲಿರುವ  ನವಿಲು ಗರಿಯಂತೆ  ನನಗೂ ಗರಿಗಳು  ಹಚ್ಚ ಹಸಿರಿನಿಂದ ಮೂಡಿದವು ಇಂದ್ರನಲ್ಲಿರುವ ವಜ್ರಾಯುದದಂತೆ  ದೇಹವೂ ಬೆಳೆಯಿತು ... ನದಿ ಉಕ್ಕಿ ಹರಿಯುವಾಗ...